ರಚನ: ಪುರಂದರದಾಸರು
ರಾಗ : ಹಂಸಧ್ವನಿ   
ತಾಳ : ಮಿಶ್ರಛಾಪು 

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ || ಅ. ಪ ||
ಶರಣು ಶರಣು ಶರಣು ಶರಣು ಶರಣು ಸಿದ್ಧಿವಿನಾಯಕ

ನಿಟಿಲ ನೇತ್ರನೆ ದೇವಿ ಸುತನೆ ನಾಗಭೂಷಣ ಪ್ರಿಯನೆ |
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ  ||  ಶರಣು ಶರಣು  ||

ಬಟ್ಟ ಮುತ್ತಿನ ಪದಕಹಾರನೆ ಬಾಹುಹಸ್ತಚತುಷ್ಟನೆ |
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶಧಾರನೆ  ||  ಶರಣು ಶರಣು  ||

ಕುಕ್ಷಿಮಹಾಲಂಬೋದರನೆ ಇಕ್ಷುಛಾಪನ ಗೆಲಿದನೆ |
ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜ ದಾಸನೆ  ||  ಶರಣು ಶರಣು  ||

ವರ್ಗ: ಪುರಂದರದಾಸ ಸಾಹಿತ್ಯ